ಮೂಲಂಗಿ:
ಮೂಲಂಗಿಯಿಂದ ತುಂಬಾ ಉಪಯೋಗಗಳಿವೆ, ಇದನ್ನು ನಾನಾ ರೀತಿಯಾಗಿ ಆಹಾರದಲ್ಲಿ ಬಳಸಬಹುದು. ಬೇಳೆಯೊಂದಿಗೆ ಸೇರಿಸಿ ಸಾಂಬಾರ್ ತಯಾರಿಸಬಹುದು, ಚಟ್ನಿಯೊಂದಿಗೆ ಜಜ್ಜಿ ಸೇರಿಸಿವುದರಿಂದ ಮೂಲಂಗಿ ಚಟ್ನಿ ತಯಾರಿ ಆಗುತ್ತದೆ. ಚಪಾತಿ ಹಿಟ್ಟಿಗೆ ಸೇರಿಸಿ ಪರೋಟ ಮಾಡಬಹುದು. ಸಲಾಡ್ ತರಹ ಉಪಯೋಗಿಸಿ ಹಸಿಯಾಗಿ ತಿನ್ನಬಹುದು. ಇದು ತಾಜಾ ತರಕಾರಿಯಾಗಿರುವುದರಿಂದ ಹಸಿಯಾಗಿ ತಿನ್ನಬಹುದು. ಇದನ್ನು ಹಸಿಯಾಗಿ ತಿನ್ನುವುದರಿಂದಲೇ ಉಪಯೋಗಗಳು ಹೆಚ್ಚು.
- ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.
- ಮೂಲಂಗಿ ಬೀಜವನ್ನು ನಿಂಬೆರಸದಲ್ಲಿ ಅರೆದು ಹಚ್ಚುವುದರಿಂದ ಹುಳುಕಡ್ಡಿ, ತುರಿ ರೋಗಗಳು ಗುಣವಾಗುತ್ತದೆ.
- ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು,ಮೂಗು,ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿ, ಒಳ್ಳೆಯದು.
- ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.
- ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.
- ಮೂಲಂಗಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಮೂತ್ರವೂ ಕಟ್ಟಿಕೊಂಡಿದ್ದರೆ ಅದರ ಬಿಡುಗಡೆಯಾಗುತ್ತದೆ.
- ಮೂಲಂಗಿ ಸೊಪ್ಪಿನ ಪಲ್ಯವನ್ನು ತಯಾರಿಸಬಹುದು, ಇದು ಚೆನ್ನಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಆದರೆ ಚೆನ್ನಾಗಿರುವ ಸೊಪ್ಪನ್ನು ನೋಡಿ ತೆಗೆದುಕೊಳ್ಳಬೇಕು.
- ದಿನನಿತ್ಯ ಸಲಾಡ್ ರೀತಿಯಲ್ಲಿ ಮೂಲಂಗಿಯನ್ನು ಸೇವಿಸಿ, ಇದರಿಂದ ತುಂಬಾ ಅನುಕೂಲಗಳಾಗುತ್ತವೆ. ಒಂದೇ ತರಹ ತಿನ್ನಲು ಬೇಸರ ಎನಿಸಿದರೆ, ಚಟ್ನಿಯೊಂದಿಗೆ ಬೆರೆಸಿ, ಮೂಲಂಗಿ ಚಟ್ನಿ ಅಥವ ಮೂಲಂಗಿ ಪರೋಟ ತಯಾರಿಸಿ ತಿನ್ನಬಹುದು.
ಮೂಲಂಗಿ ಪರೋಟ ಮತ್ತು ಚಟ್ನಿ ರೆಸಿಪಿಯನ್ನು ಅಡಿಗೆ ರೆಸಿಪಿಯಲ್ಲಿ ನೋಡಬಹುದು.
0 comments:
Post a Comment